ಪರಿಚಯ:
ಕರ್ನಾಟಕ ರಾಜ್ಯ ಬೀಜ ನಿಗಮವು ಒಂದು ಸ್ವತಂತ್ರ್ಯ ಉದ್ಯಮವಾಗಿ ದಿನಾಂಕ 30.06.1978 ರಂದು 1956ರ ಕಂಪನಿ ಕಾಯ್ದೆ ಯನ್ವಯ ನೋಂದಾಯಿತಗೊಂಡು, ಪ್ರಮುಖ ಪರಿಕರವಾದಂತಹ ‘ಬೀಜ’ ಗಳ ಉದ್ದಿಮೆಯಲ್ಲಿ ತೊಡಗಿಸಿಕೊಂಡು ರಾಜ್ಯದ ರೈತರಿಗೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುವ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.
II ನಿಗಮದ ಉದ್ದೇಶ:
ರಾಜ್ಯದ ಬೀಜ ಉದ್ಯಮದಲ್ಲಿ ಮುಂದಾಳಾಗಿ ಸತತವಾಗಿ ಒಳ್ಳೆಯ ಗುಣಮಟ್ಟ ಹೊಂದಿದ ಬೀಜಗಳನ್ನು ಸರಿಯಾದ ವೇಳೆಗೆ ದಾಸ್ತಾನು ಮಾಡಿ ಸರಿಯಾದ ಸ್ಥಳದಲ್ಲಿ ಯೋಗ್ಯದರದಲ್ಲಿ ಒದಗಿಸುವುದು.
III. ಹೂಡಿಕೆ:
ಕರ್ನಾಟಕ ಸರ್ಕಾರ, ರಾಷ್ಟ್ರೀಯ ಬೀಜ ನಿಗಮದ ಮೂಲಕ ಭಾರತ ಸರ್ಕಾರ ಮತ್ತು ಬೀಜೋತ್ಪಾದನಾ ರೈತರು ನಿಗಮದ ಷೇರು ಬಂಡವಾಳದಲ್ಲಿ 35:30:35 ರ ಅನುಪಾತದಲ್ಲಿ ಬಂಡವಾಳ ತೊಡಗಿಸಲು ಅರ್ಹರಾಗಿರುತ್ತಾರೆ. ಪ್ರಸಕ್ತ ಇರುವ ಷೇರು ಬಂಡವಾಳದ ವಿವರಗಳು ಈ ಕೆಳಗಿನಂತಿರುತ್ತವೆ:
ಕ್ರಮ
ಸಂಖ್ಯೆ.
|
ವಿವರ
|
ಹಂಚಿಕೆಯಾದ ಬಂಡವಾಳ
|
ವಂತಿಕೆಯಾದ & ಪಾವತಿಸಲಾದ ಬಂಡವಾಳ
|
ವಂತಿಕೆಯಾಗದ ಬಂಡವಾಳ
|
|
|
ಈಕ್ವಿಟಿ ಷೇರು
|
ಈಕ್ವಿಟಿ ಷೇರು
|
ಈಕ್ವಿಟಿ ಷೇರು
|
|
|
ಸಂಖ್ಯೆ
|
ಮೌಲ್ಯವು ರೂಪಾಯಿಗಳಲ್ಲಿ
|
ಸಂಖ್ಯೆ
|
ಮೌಲ್ಯವು ರೂಪಾಯಿಗಳಲ್ಲಿ
|
ಸಂಖ್ಯೆ
|
ಮೌಲ್ಯವು ರೂಪಾಯಿಗಳಲ್ಲಿ
|
1
|
ಕರ್ನಾಟಕ ಸರ್ಕಾರ 35%
|
1,57,500
|
1,57,50,000
|
1,57,500
|
1,57,50,000
|
-
|
|
2
|
ರಾಷ್ಟ್ರೀಯ ಬೀಜ ನಿಗಮ ನಿಯಮಿತ (ಭಾರತ ಸರ್ಕಾರ 30%
|
1,35,000
|
1,35,00,000
|
62,230
|
62,23,000
|
72,770
|
72,77,000
|
3
|
ಬೀಜೋತ್ಪಾದಕರು 35%
|
1,57,500
|
1,57,50,000
|
1,55,160
|
1,55,16,000
|
-
|
-
|
|
ಒಟ್ಟು
|
4,50,000
|
4,50,00,000
|
3,74,890
|
3,74,89,000
|
72,770
|
72,77,000
|
ಬೀಜೋತ್ಪಾದಕರ ಪಾವತಿಸಲಾದ ಬಂಡವಾಳ
|
ಸರ್ಕಾರಗಳ ಪಾವತಿಸಲಾದ ಬಂಡವಾಳ
|
|
ಸಂಖ್ಯೆ.
|
ಮೌಲ್ಯ
|
|
ರಾ.ಬೀ.ನಿ.
|
ಕರ್ನಾಟಕ ಸರ್ಕಾರ
|
ಪೂರ್ಣವಾಗಿ ಪಾವತಿಸಿದ ಷೇರುಗಳು
|
1,55,160
|
1,55,16,000.00
|
|
|
|
|
|
|
ಈಕ್ವಿಟಿ ಷೇರು ಬಂಡವಾಳ
|
62,23,000
|
1,57,50,000
|
|
|
|
|
62,23,000
|
1,57,50,000
|
|
|
ಅಧೀಕೃತ ಬಂಡವಾಳ - ರೂ.500.00 ಲಕ್ಷಗಳು
ಹಂಚಿಕೆಯಾದ ಬಂಡವಾಳ - ರೂ.450.00 ಲಕ್ಷಗಳು
ವಂತಿಕೆಯಾದ & ಪಾವತಿಸಲಾದ ಬಂಡವಾಳ - ರೂ.374.89 ಲಕ್ಷಗಳು
ವಂತಿಕೆಯಾಗದ ಬಂಡವಾಳ - ರೂ. 72.77 ಲಕ್ಷಗಳು
|
iv.ಮಂಡಳಿ ರಚನೆ:
ನಿಗಮದ ಮೆಮೊರ್ಯಾಂಡಮ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಷಿಯೇಷನ್ ಪ್ರಕಾರ ಪ್ರಸ್ತುತ ಮಾನ್ಯ ಕೃಷಿ ಸಚಿವರು, ಕರ್ನಾಟಕ ಸರ್ಕಾರ ಇವರು ನಿಗಮದ ಅಧ್ಯಕ್ಷರಾಗಿರುತ್ತಾರೆ. ನಿಗಮವು 14 ನಿರ್ದೇಶಕರುಗಳನ್ನು ಹೊಂದಿದ್ದು, ರಾಜ್ಯ ಸರ್ಕಾರ, ರಾಷ್ಟ್ರೀಯ ಬೀಜ ನಿಗಮ ನಿಯಮಿತ, ರೈತ ಷೇರುದಾರರ ಪ್ರತಿನಿಧಿಗಳು ಹಾಗೂ ಸ್ವತಂತ್ರ ನಿರ್ದೇಶಕರುಗಳನ್ನು ಹೊಂದಿರುತ್ತದೆ. ಸಧ್ಯ, ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ 5 ನಿರ್ದೇಶಕರು, ರಾಷ್ಟ್ರೀಯ ಬೀಜ ನಿಗಮ ನಿಯಮಿತದ ಪ್ರತಿನಿಧಿಗಯಾಗಿ 3 ನಿರ್ದೇಶಕರು, ರೈತ ಷೇರುದಾರ ಪ್ರತಿನಿಧಿಗಳಾಗಿ 4 ನಿರ್ದೇಶಕರು ಮತ್ತು ಸ್ವತಂತ್ರ ನಿರ್ದೇಶಕರಾಗಿ 2 ನಿರ್ದೇಶಕರಿರುತ್ತಾರೆ.
v.ಷೇರುದಾರ ಬೀಜ ಬೆಳೆಗಾರರು:
ನಿಗಮದ ಆರ್ಟಿಕಲ್ಸ್ ಆಫ್ ಅಸೋಷಿಯೇಷನ್ ಬೀಜ ಬೆಳೆಗಾರರಿಗೆ ನಿಗಮದ ಷೇರುದಾರರಾಗುವ ಅವಕಾಶವನ್ನು ಕಲ್ಪಿಸಿದೆ. ಅದರನ್ವಯ 2020-21 ರ ಅಂತ್ಯಕ್ಕೆ 9048 ಷೇರುದಾರ ಬೀಜ ಬೆಳೆಗಾರರಿರುತ್ತಾರೆ. ಬೀಜ ಬೆಳೆಗಾರರು ರೂ.100/- ಮುಖ ಬೆಲೆಯ ಕನಿಷ್ಠ 10 ಹಾಗೂ ಗರಿಷ್ಠ 100 ಈಕ್ವಿಟಿ ಷೇರುಗಳನ್ನು ಹೊಂದುವ ಅವಕಾಶವಿರುತ್ತದೆ. 2000-01 ರ ಅವಧಿಯವರೆಗೆ ಕಂಪನಿಯು ಷೇರುದಾರರ ಬಂಡವಾಳದ ಮೇಲೆ ಶೇಕಡ 15 ರಿಂದ 25 ರಷ್ಟು ಪ್ರೋತ್ಸಾಹ ಧನವನ್ನು ಡಿಸ್ಕೌಂಟ್ ಕೂಪನ್ ರೂಪದಲ್ಲಿ ನೀಡುತ್ತಾ ಬಂದಿದ್ದು, ಈ ಕೂಪನ್ ಉಪಯೋಗಿಸಿಕೊಂಡು ಷೇರುದಾರರು ಮೂಲ ಅಥವಾ ಪ್ರಮಾಣಿತ ಬೀಜವನ್ನು ಖರೀದಿಸುವ ಅವಕಾಶವಿರುತ್ತದೆ. 2012-13 ರಿಂದ 2020-21 ರವರೆಗೆ ಶೇಕಡ 25 ರ ಡಿಸ್ಕೌಂಟ್ ಕೂಪನ್ ಜೊತೆಗೆ ಶೇಕಡ 10 ರಷ್ಟು ಲಾಭಾಂಶವನ್ನು ನೀಡಲಾಗಿದೆ. ದಿನಾಂಕ 31.03.2021 ರವರೆಗಿನ ಜಿಲ್ಲಾವಾರು ಷೇರುದಾರರ ಪಟ್ಟಿಯು ಈ ಕೆಳಗಿನಂತಿರುತ್ತದೆ.
ಕ್ರ. ಸಂ.
|
ಜಿಲ್ಲೆಗಳ ಹೆಸರು
|
ಷೇರುದಾರರ ಸಂಖ್ಯೆ
|
ಷೇರುಗಳ ಸಂಖ್ಯೆ
|
1
|
ಬೆಂಗಳೂರು ನಗರ & ಗ್ರಾಮಾಂತರ)
|
192
|
4575
|
2
|
ಕೋಲಾರ
|
958
|
27015
|
3
|
ಚಿಕ್ಕಬಳ್ಳಾಪುರ
|
318
|
3570
|
4
|
ಚಿಂತಾಮಣಿ
|
309
|
3620
|
5
|
ತುಮಕೂರು
|
446
|
5570
|
6
|
ಮೈಸೂರು
|
107
|
1895
|
7
|
ಕೆ.ಆರ್.ನಗರ
|
359
|
4370
|
8
|
ಚಿಕ್ಕಮಗಳೂರು
|
19
|
505
|
9
|
ಚಾಮರಾಜನಗರ
|
53
|
865
|
10
|
ಮಂಡ್ಯ
|
94
|
1155
|
11
|
ಹಾಸನ
|
31
|
425
|
|
ವಲಯ– 1 ಒಟ್ಟು
|
2886
|
53565
|
1
|
ಚಿತ್ರದುರ್ಗ
|
258
|
2875
|
2
|
ದಾವಣಗೆರೆ
|
653
|
10045
|
3
|
ಬಳ್ಳಾರಿ
|
1186
|
17780
|
4
|
ಶಿವಮೊಗ್ಗ
|
62
|
715
|
|
ವಲಯ– 2 ಒಟ್ಟು
|
2159
|
31415
|
1
|
ಧಾರವಾಡ
|
439
|
5165
|
2
|
ಸಿರಸಿ
|
1
|
10
|
3
|
ಹಾವೇರಿ
|
593
|
7565
|
4
|
ರಾಣೇಬೆನ್ನೂರು
|
519
|
7610
|
5
|
ಗದಗ
|
210
|
2555
|
|
ವಲಯ– 3 ಒಟ್ಟು
|
1762
|
22905
|
1
|
ರಾಯಚೂರು
|
60
|
785
|
2
|
ಸಿಂಧನೂರು
|
137
|
1655
|
3
|
ಕೊಪ್ಪಳ
|
529
|
5555
|
4
|
ಬಾಗಲಕೋಟೆ
|
343
|
3865
|
5
|
ವಿಜಯಪುರ
|
45
|
540
|
6
|
ಬೆಳಗಾವಿ
|
15
|
145
|
7
|
ಸವದತ್ತಿ
|
142
|
1425
|
8
|
ಕಲಬುರಗಿ
|
159
|
2100
|
9
|
ಬಿ.ಆರ್.ಗುಡಿ
|
30
|
725
|
10
|
ಬೀದರ್
|
76
|
845
|
11
|
ರೋಣ
|
705
|
8175
|
|
ವಲಯ– 4 ಒಟ್ಟು
|
2241
|
25815
|
|
ಒಟ್ಟುಸಂಖ್ಯೆ ( ವಲಯ- 1 to 4)
|
9048
|
133700
|
- ನಿಗಮದ ಕಾರ್ಯಚಟುವಟಿಕೆಗಳ ಸಂಘಟನೆ:
ಇಂದು ನಿಗಮವು ಜಾಗತೀಕರಣ, ಉದಾರ ಆರ್ಥಿಕ ನೀತಿ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಿಗಮದ ನಿರ್ದೇಶಕ ಮಂಡಳಿಯ ಮೂಲಕ ಆಡಳಿತವನ್ನು ನಡೆಸುತ್ತಿದ್ದು, ವ್ಯವಸ್ಥಾಪಕ ನಿರ್ದೇಶಕರು ನಿಗಮದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು, ನಿರ್ದೇಶಕ ಮಂಡಳಿಯಲ್ಲಿ ಪ್ರತಿನಿಧಿತ್ವ ಹೊಂದಿದ್ದು, ಮಂಡಳಿಯ ನೀತಿ ನಿಯಮಗಳ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರಿಗೆ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಹಾಯ ಮಾಡಲು ಪ್ರಸ್ತುತ ಪ್ರಧಾನ ಕಛೇರಿಯಲ್ಲಿ ಪ್ರಧಾನ ವ್ಯವಸ್ಥಾಪಕರು (ಲೆಕ್ಕ ಮತ್ತು ಹಣಕಾಸು)/ (ಉತ್ಪಾದನೆ & ಗುಣ ನಿಯಂತ್ರಣ )/ (ಮಾರಾಟ ಮತ್ತು ವಾಣಿಜ್ಯ), ಉಪ ಪ್ರಧಾನ ವ್ಯವಸ್ಥಾಪಕರು (ಖರೀದಿ), ಕಂಪನಿ ಕಾರ್ಯದರ್ಶಿ ಮತ್ತು ಉಪ ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ ಮತ್ತು ಆಡಳಿತ) ಮತ್ತಿತರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿಗಮವು ಪ್ರಾರಂಭಗೊಂಡಾಗಿನಿಂದ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳ ವಿವರಗಳು ಈ ಕೆಳಗಿನಂತಿರುತ್ತವೆ:
ನಿಗಮವು ಪ್ರಾರಂಭಗೊಂಡಾಗಿನಿಂದ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು :
ಕ್ರ.ಸಂ.
|
ಹೆಸರು
|
ಅವಧಿ
|
1
|
ಶ್ರೀ ಡಿ.ಬಿ.ಪವಾರ್
|
: 20-06-1974 ರಿಂದ 05-08-1976
|
2
|
ಶ್ರೀ ಹೆಚ್.ಸಿ.ವಿಶ್ವನಾಥನ್
|
: 05-08-1976 ರಿಂದ 06-02-1978
|
3
|
ಶ್ರೀ ಕೆ.ಎಸ್.ಎನ್.ಮೂರ್ತಿ, ಭಾ.ಆ.ಸೇ.,
|
: 06-02-1978 ರಿಂದ 22-12-1980
|
4
|
ಶ್ರೀ ಜಿ.ವಿ.ವಿಶ್ವನಾಥ್, ಭಾ.ಆ.ಸೇ.,
|
: 22-12-1980 ರಿಂದ 14-06-1982
|
5
|
ಶ್ರೀ ಟಿ.ಪಿ.ಇಸ್ಸಾರ್, ಭಾ.ಆ.ಸೇ.,
|
: 14-06-1982 ರಿಂದ 24-09-1983
|
6
|
ಶ್ರೀ ಜೆ.ಕೆ.ಅರೋರ, ಭಾ.ಆ.ಸೇ.,
|
: 24-09-1983 ರಿಂದ 16-08-1985
|
7
|
ಶ್ರೀ ಧೀರೇಂದ್ರ ಸಿಂಗ್, ಭಾ.ಆ.ಸೇ.,
|
: 16-08-1985 ರಿಂದ 04-11-1986
|
8
|
ಶ್ರೀ ಜೆ.ಪಿ.ಶರ್ಮಾ, ಭಾ.ಆ.ಸೇ.,
|
: 04-11-1986 ರಿಂದ 12-08-1988
|
9
|
ಶ್ರೀ ಎಸ್.ಕೃಷ್ಣ ಕುಮಾರ್, ಭಾ.ಆ.ಸೇ.,
|
: 12-08-1988 ರಿಂದ 15-11-1990
|
10
|
ಶ್ರೀ ಆರ್.ಶಂಕರಪ್ಪ, ಭಾ.ಆ.ಸೇ.,
|
: 15-11-1990 ರಿಂದ 24-12-1990
|
11
|
ಶ್ರೀ ಎಸ್.ಎನ್.ಶಾಂತ ಕುಮಾರ್, ಭಾ.ಆ.ಸೇ.,
|
: 24-12-1990 ರಿಂದ 24-12-1991
|
12
|
ಡಾ: ಕೆ.ವಿ.ಪುರಾಣಿಕ್ ಮಠ್
|
: 24-12-1991 ರಿಂದ 28-12-1992
|
13
|
ಶ್ರೀ ಬಿ.ಎಸ್.ಪಾಟೀಲ್, ಭಾ.ಆ.ಸೇ.,
|
: 28-12-1992 ರಿಂದ 02-08-1994
|
14
|
ಶ್ರೀ ಎಸ್.ಆರ್.ವಿಜಯ್, ಭಾ.ಆ.ಸೇ.,
|
: 02-08-1994 ರಿಂದ 22-03-1996
|
15
|
ಶ್ರೀ ಜೆ.ಕೆ.ಅರೋರ, ಭಾ.ಆ.ಸೇ.,
|
: 22-03-1996 ರಿಂದ 31-07-1997
|
16
|
ಶ್ರೀ ಅಭಯ್ ಪ್ರಕಾಶ್, ಭಾ.ಆ.ಸೇ.,
|
: 02-09-1997 ರಿಂದ 29-11-2000
|
17
|
ಶ್ರೀ ಚಿರಂಜೀವ್ ಸಿಂಗ್, ಭಾ.ಆ.ಸೇ.,
|
: 29-11-2000 ರಿಂದ 26-12-2001
|
18
|
ಶ್ರೀ ಎ.ಕೆ.ಅಗರವಾಲ್, ಭಾ.ಆ.ಸೇ.,
|
: 26-12-2001 ರಿಂದ 20-11-2003
|
19
|
ಶ್ರೀ ಶಾಂತನು ಕನ್ಸಲ್, ಭಾ.ಆ.ಸೇ.,
|
: 20-11-2003 ರಿಂದ 19-10-2005
|
20
|
ಶ್ರೀ ಎ.ರಾಮಸ್ವಾಮಿ, ಭಾ.ಆ.ಸೇ.,
|
: 19-10-2005 ರಿಂದ 21-06-2008
|
21
|
ಶ್ರೀ ಪಿ.ರವಿಕುಮಾರ್, ಭಾ.ಆ.ಸೇ.,
|
: 21-06-2008 ರಿಂದ 24-11-2008
|
22
|
ಶ್ರೀ ಈ.ವೆಂಕಯ್ಯ, ಭಾ.ಆ.ಸೇ.,
|
: 24-11-2008 ರಿಂದ 20-06-2009
|
23
|
ಡಾ: ಎಸ್.ಸುಬ್ರಮ್ಮಣ್ಯ, ಭಾ.ಆ.ಸೇ.,
|
: 20-06-2009 ರಿಂದ 30-09-2009
|
24
|
ಶ್ರೀ ಎನ್.ಸಿ.ಮುನಿಯಪ್ಪ, ಭಾ.ಆ.ಸೇ.,
|
: 19-11-2009 ರಿಂದ 16-05-2011
|
25
|
ಡಾ: ಸಂದೀಪ್ ದವೆ, ಭಾ.ಆ.ಸೇ.,
|
: 16-05-2011 ರಿಂದ 15-02-2012
|
26
|
ಡಾ: ಬಾಬುರಾವ್ ಮುಡಬಿ, ಭಾ.ಆ.ಸೇ.,
|
: 15-02-2012 ರಿಂದ 31-05-2012
|
27
|
ಶ್ರೀ ಭರತ್ ಲಾಲ್ ಮೀನಾ, ಭಾ.ಆ.ಸೇ.,
|
: 01-06-2012 ರಿಂದ 06-03-2015
|
28
|
ಶ್ರೀಮತಿ.ಜಿ.ಲತಾ ಕೃಷ್ಣರಾವ್, ಭಾ.ಆ.ಸೇ.,
|
: 06-03-2015 ರಿಂದ 28-10-2016
|
29
|
ಶ್ರೀ ಟಿ.ಎಂ.ವಿಜಯ ಭಾಸ್ಕರ್, ಭಾ.ಆ.ಸೇ.,
|
: 19-11-2016 ರಿಂದ 30-11-2017
|
30
|
ಶ್ರೀ ಡಿ.ವಿ.ಪ್ರಸಾದ್, ಭಾ.ಆ.ಸೇ.,
|
: 28-12-2017 ರಿಂದ 04-08-2018
|
31
|
ಶ್ರೀಮತಿ.ವಂದಿತಾ ಶರ್ಮಾ, ಭಾ.ಆ.ಸೇ.,
|
: 04-08-2018 ರಿಂದ 27-10-2018
|
32
|
ಶ್ರೀ ಎಂ.ಮಹೇಶ್ವರ ರಾವ್, ಭಾ.ಆ.ಸೇ.,
|
: 27-10-2018 ರಿಂದ 13-03-2019
|
33
|
ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಭಾ.ಆ.ಸೇ.,
|
: 13-03-2019 ರಿಂದ 17-07-2020
|
34
|
ಡಾ: ರಾಜ್ ಕುಮಾರ್ ಖತ್ರಿ, ಭಾ.ಆ.ಸೇ.,
|
: 17.07.2020 ರಿಂದ 13.01.2021
|
35
|
ಶ್ರೀ ಬಿ.ಸಿ.ಪಾಟೀಲ್,
ಮಾನ್ಯ ಕೃಷಿ ಸಚಿವರು,
ಕರ್ನಾಟಕ ಸರ್ಕಾರ
|
: 13.01.2021
|
ನಿಗಮವು ಪ್ರಾರಂಭಗೊಂಡಾಗಿನಿಂದ ಪ್ರಸಕ್ತ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರುಗಳು:
ಕ್ರ.ಸಂ
|
ಹೆಸರು
|
ಅವಧಿ
|
1
|
ಡಾ: ಎಸ್.ಆರ್.ಚಂದ್ರಶೇಖರಯ್ಯ
|
: 08-08-1973 ರಿಂದ 09-01-1976
|
2
|
ಶ್ರೀ ಪಿ.ಯು.ಬೆಳ್ಳಿಯಪ್ಪ
|
: 09-01-1976 ರಿಂದ 31-07-1978
|
3
|
ಡಾ: ಟಿ.ವಿ.ಸಂಪತ್
|
: 31-07-1978 ರಿಂದ 27-01-1982
|
4
|
ಶ್ರೀ ಸಿ.ಕುಸುಮಾಕರ
|
: 27-01-1982 ರಿಂದ 28-03-1984
|
5
|
ಶ್ರೀ ಸಿ.ಲಿಂಗರಾಜೇ ಅರಸ್
|
: 28-03-1984 ರಿಂದ 20-12-1991
|
6
|
ಡಾ: ಎಂ.ಮಲ್ಲಪ್ಪ
|
: 20-12-1991 ರಿಂದ 08-06-1992
|
7
|
ಡಾ: ಎ.ರಾಜಣ್ಣ
|
: 08-06-1992 ರಿಂದ 03-01-1996
|
8
|
ಡಾ: ಕೆ.ವಿ.ಸರ್ವೇಶ್
|
: 03-01-1996 ರಿಂದ 03-07-2000
|
9
|
ಶ್ರೀ ಟಿ.ವಿ.ಗುರುದೇವಯ್ಯ
|
: 03-07-2000 ರಿಂದ 06-01-2003
|
10
|
ಡಾ: ಹೆಚ್.ಡಿ.ಶೇಷಗಿರಿ
|
: 06-01-2003 ರಿಂದ 25-11-2004
|
11
|
ಶ್ರೀ ಡಿ.ರಾಜು
|
: 25-11-2004 ರಿಂದ 31-05-2006
|
12
|
ಶ್ರೀ ಟಿ.ವಿ.ಗುರುದೇವಯ್ಯ
|
: 31-05-2006 ರಿಂದ 22-08-2008
|
13
|
ಡಾ: ಕೆ.ವಿ.ಸರ್ವೇಶ್
|
: 22-08-2008 ರಿಂದ 11-01-2010
|
14
|
ಶ್ರೀ ಕೆ.ಆನಂದಕೃಷ್ಣ
|
: 11-01-2010 ರಿಂದ 30-08-2014
|
15
|
ಡಾ: ವಿಷಕಂಠ
|
: 05-09-2014 ರಿಂದ 30-04-2015
|
16
|
ಡಾ: ಹೆಚ್.ಸುಬ್ಬಯ್ಯ
|
: 30-04-2015 ರಿಂದ 27-07-2015
|
17
|
ಡಾ: ಶಿವಮೂರ್ತಪ್ಪ
|
: 27-07-2015 ರಿಂದ 28-02-2018
|
18
|
ಶ್ರೀ ಬಿ.ಶಿವರಾಜು
|
: 01-03-2018 ರಿಂದ 17-11-2018
|
19
|
ಶ್ರೀ ಎಂ.ಹೆಚ್.ಬಂಥನಾಳ
|
: 17-11-2018 ರಿಂದ 31-07-2019
|
20
|
ಡಾ: ಜಿ.ಟಿ.ಪುತ್ರ
|
: 17-09-2019 ರಿಂದ 21-04-2020
|
21.
|
ಶ್ರೀ ವೆಂಕಟರಾಮರೆಡ್ಡಿ ಜೆ.ಪಾಟೀಲ್
|
: 21-04-2020 ರಿಂದ 01.07.2021
|
|
ಹಾಲಿ
|
|
22
|
ಡಾ: ಜಿ.ಟಿ.ಪುತ್ರ
|
: 01.07.2021
|
ಕರ್ನಾಟಕ ರಾಜ್ಯದಲ್ಲಿ ವಿವಿಧ ಹವಾಮಾನ ಪರಿಸ್ಥಿತಿ ಇದ್ದು, ಅದಕ್ಕನುಗುಣವಾಗಿ ಬೆಳೆಯ ಪದ್ಧತಿ, ಸಂಭಾವ್ಯ ಬೀಜೋತ್ಪಾದನೆಯ ಸಾಮಥ್ರ್ಯ, ಆಡಳಿತದ ನಿಯಂತ್ರಣಕ್ಕೆ ಅನುಗುಣವಾಗುವಂತೆ ಕ್ಷೇತ್ರಮಟ್ಟದ ವಿಭಜನೆ ಇವುಗಳನ್ನು ಆಧರಿಸಿ ನಿಗಮವು ರಾಜ್ಯದ ವಿವಿದೆಡೆಗಳಲ್ಲಿ ಕಾರ್ಯಚಟುವಟಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಕೇಂದ್ರಗಳ ಮುಖ್ಯಸ್ಥರಾಗಿ ಸಹಾಯಕ ಪ್ರಧಾನ ವ್ಯವಸ್ಥಾಪಕರು(ಕಾ) / ವ್ಯವಸ್ಥಾಪಕರು(ಕಾ) / ಸಹಾಯಕ ವ್ಯವಸ್ಥಾಪಕರು(ಕಾ) ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ನಿಗಮವು 35 ಕಾರ್ಯಚಟುವಟಿಕೆ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸಿದೆ. ಕೇಂದ್ರಗಳ ವಿವರಗಳು ಈ ಕೆಳಗಿನಂತಿರುತ್ತವೆ:
STATEMENT OF LOCATION OF OPERATIONAL CENTRES OF THE COMPANY
No
|
DISTRICTS
|
No
|
CENTRES
|
No
|
PROCESSING
UNIT
|
No
|
SALE POINTS
|
1
|
Bagalkote
|
1
|
Bagalkote
|
1
|
Bagalkote
|
1
|
Bagalkote
|
2
|
Bengaluru (R)
|
|
--
|
|
--
|
|
--
|
3
|
Bengaluru (U)
|
2
|
Bengaluru
|
|
--
|
2
|
Bengaluru
|
4
|
Belagavi
|
3
|
Belagavi
|
|
--
|
3
|
Belagavi
|
|
Belagavi
|
4
|
Savadatti
|
2
|
Savadatti
|
4
|
Savadatti
|
5
|
Ballari
|
5
|
Ballari
|
3
|
Ballari
|
5
|
Ballari
|
6
|
Bidar
|
6
|
Bidar
|
4
|
Bidar
|
6
|
Bidar
|
|
Bidar
|
7
|
Bhalki
|
5
|
Bhalki
|
7
|
Bhalki
|
7
|
C.B.Pura
|
8
|
C.B.Pura
|
6
|
C.B.Pura
|
8
|
C.B.Pura
|
|
C.B.Pura
|
9
|
Chitamani
|
|
--
|
9
|
Chitamani
|
8
|
Chamarajanagar
|
10
|
Chamarajanagar
|
|
--
|
10
|
Chamarajanagar
|
9
|
Chikkamagaluru
|
11
|
Chikkamagaluru
|
|
--
|
11
|
Chikkamagaluru
|
10
|
Chitrdurga
|
12
|
Chitrdurga
|
|
--
|
12
|
Chitrdurga
|
11
|
Kodagu
|
|
--
|
|
--
|
|
--
|
12
|
Davanagere
|
13
|
Davanagere
|
7
|
Davanagere
|
13
|
Davanagere
|
13
|
Dharawad
|
14
|
Dharawad
|
8
|
Dharawad
|
14
|
Dharawad
|
14
|
Gadag
|
15
|
Gadag
|
9
|
Gadag
|
15
|
Gadag
|
|
Gadag
|
16
|
Ron
|
10
|
Ron
|
16
|
Ron
|
15
|
Kalaburagi
|
17
|
Kalaburagi
|
11
|
Kalaburagi
|
17
|
Kalaburagi
|
16
|
Hassan
|
18
|
Hassan
|
|
|
18
|
Hassan
|
|
Hassan
|
19
|
C.R.Patna
|
12
|
C.R.Patna
|
19
|
C.R.Patna
|
17
|
Haveri
|
20
|
Haveri
|
13
|
Haveri
|
20
|
Haveri
|
|
Haveri
|
21
|
Ranebennur
|
|
|
21
|
Ranebennur
|
18
|
Kolar
|
22
|
Kolar
|
14
|
Kolar
|
22
|
Kolar
|
19
|
Koppal
|
23
|
Koppal
|
15
|
Koppal
|
23
|
Koppal
|
20
|
Mandya
|
24
|
Mandya
|
16
|
Mandya
|
24
|
Mandya
|
21
|
Mysuru
|
25
|
Mysuru
|
17
|
Mysuru
|
25
|
Mysuru
|
|
Mysuru
|
26
|
K.R.Nagara
|
18
|
K.R.Nagara
|
26
|
K.R.Nagara
|
22
|
Uttara Kannada
|
27
|
Sirsi
|
|
|
27
|
Sirsi
|
23
|
Raichur
|
28
|
Raichur
|
19
|
Raichur
|
28
|
Raichur
|
|
Raichur
|
29
|
Sindhanur
|
20
|
Sindhanur
|
|
Sindhanur
|
24
|
Ramanagara
|
|
--
|
|
--
|
29
|
--
|
25
|
Shivamogga
|
30
|
Shivamogga
|
21
|
Shivamogga
|
31
|
Shivamogga
|
26
|
Tumkuru
|
31
|
Tumkuru
|
22
|
Tumkuru
|
32
|
Tumkuru
|
|
|
32
|
Sira
|
23
|
Sira
|
|
|
27/28
|
Udupi / Mangalore
|
33
|
Kundapur
|
|
--
|
33
|
Kundapur
|
29
|
Vijayapura
|
34
|
Vijayapura
|
24
|
Vijayapura
|
34
|
Vijayapura
|
30
|
Yadgir
|
35
|
B.R.Gudi
|
25
|
B.R.Gudi
|
35
|
B.R.Gudi
|
VII ಸಂಸ್ಥೆಯ ಪ್ರಮುಖ ಚಟುವಟಿಕೆಗಳು:
ಅ] ಬೀಜೋತ್ಪಾದನೆ:
ನಿಗಮವು ಷೇರುದಾರ ಬೆಳೆಗಾರರ ಮೂಲಕ ಮತ್ತು ಇತರೆ ಸೌಕರ್ಯಭರಿತ ಪ್ರಗತಿಶೀಲ ರೈತ ಬೆಳೆಗಾರರ ಮೂಲಕ ಅವರದೇ ಜಮೀನುಗಳಲ್ಲಿ ಗುತ್ತಿಗೆ/ಒಪ್ಪಂದದ ಆಧಾರದ ಮೇಲೆ ಬೀಜೋತ್ಪಾದನಾ ಕಾರ್ಯಕ್ರಮವನ್ನು ಕೈಗೊಳ್ಳುತ್ತದೆ. ಬೀಜ ಬೆಳೆಗಾರ ರೈತರಿಗೆ ನಿಗಮದ ತರಬೇತಿ ಹೊಂದಿದ ತಾಂತ್ರಿಕ ಅಧಿಕಾರಿಗಳ ಮೂಲಕ ಬೀಜೋತ್ಪಾದನಾ ತಾಂತ್ರಿಕ ಜ್ಞಾನವನ್ನು ಒದಗಿಸಲಾಗುತ್ತಿದೆ.
ಆ] ಬೀಜ ಸಂಸ್ಕರಣೆ:
ನಿಗಮವು ರಾಜ್ಯಾದ್ಯಂತ 25 ಬೀಜ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಬೀಜ ಬೆಳೆಗಾರ ರೈತರು ಕ್ಷೇತ್ರ ಮಟ್ಟದಲ್ಲಿ ಬೀಜದ ಗುಣಮಟ್ಟಗಳ ಮಾನದಂಡಗಳಿಗೆ ಅನುಗುಣವಾಗಿ ಬೆಳೆದ ಕಚ್ಛಾ ಬೀಜಗಳನ್ನು ನಿಗಮದ ಬೀಜ ಸಂಸ್ಕರಣಾ ಕೇಂದ್ರಗಳಲ್ಲಿ ಉಚಿತವಾಗಿ ಸಂಸ್ಕರಣೆ ಮಾಡಲಾಗುತ್ತದೆ.
ರಾಷ್ಟ್ರೀಯ ಬೀಜ ಯೋಜನೆ ಹಂತ-2 ರಲ್ಲಿ ನಿಗಮವು ದಾವಣಗೆರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ ಬೀಜ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ರಾಷ್ಟ್ರೀಯ ಬೀಜ ಯೋಜನೆ ಹಂತ-3 ರಲ್ಲಿ ನಿಗಮವು ಬಳ್ಳಾರಿ ಮತ್ತು ಮೈಸೂರು ಕೇಂದ್ರಗಳಲ್ಲಿ ಹೆಚ್ಚಿನ ಸಾಮಥ್ರ್ಯದ ಬೀಜ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಿದೆ. 2008-2009 ರಲ್ಲಿ ಕರ್ನಾಟಕ ಸೀಡ್ ಮಿಷನ್ ಕಾರ್ಯಕ್ರಮದಲ್ಲಿ ಬೀದರ್ ಮತ್ತು ಬಿಜಾಪುರ ಕೇಂದ್ರಗಳಲ್ಲಿ ಎರಡು ಅತ್ಯಾಧುನಿಕ ಮತ್ತು ಹೆಚ್ಚಿನ ಸಾಮಥ್ರ್ಯದ ಬೀಜ ಸಂಸ್ಕರಣಾ ಕೇಂದ್ರಗಳನ್ನು ಅಳವಡಿಸಲಾಗಿದೆ. ನಿಗಮವು 2007-08 ರಿಂದ ರಾಷ್ಟ್ರೀಯ ಬೀಜ ವಿಕಾಸ ಯೋಜನೆಯಲ್ಲಿ ಭಾಗವಹಿಸುತ್ತಿದ್ದು, ನಿಗಮದ ಬಹುತೇಕ ಸ್ಥಳಗಳಲ್ಲಿ ವೈಜ್ಞಾನಿಕ ಬೀಜ ಸಂಸ್ಕರಣಾ ಮತ್ತು ಗೋದಾಮುಗಳನ್ನು ನಿರ್ಮಿಸಿದೆ ಹಾಗೂ ಸಂಸ್ಕರಣಾ ಯಂತ್ರಗಳನ್ನು ಅಳವಡಿಸಿದ್ದು, ಈ ಕಾರ್ಯವು ಮುಂದುವರೆಯುತ್ತಿದೆ. ಪ್ರಸ್ತುತ, ನಿಗಮವು 25 ಬೀಜ ಸಂಸ್ಕರಣಾ ಕೇಂದ್ರಗಳನ್ನು ಹೊಂದಿದ್ದು, ಅವುಗಳ ಸಂಸ್ಥಾಪಿತ ಒಟ್ಟಾರೆ ವಾರ್ಷಿಕ ಸಾಮಥ್ರ್ಯ ಗೋಧಿ ಬೆಳೆ ಆಧಾರದ ಮೇಲೆ 8,17,500 ಕ್ವಿಂಟಾಲ್ ಗಳಷ್ಟಿದ್ದು, ವಾರ್ಷಿಕ ಕಾರ್ಯಚರಣಾ ಸಾಮಥ್ರ್ಯ 4,13,720 ಕ್ವಿಂಟಾಲ್ ಗಳಷ್ಟಿದೆ. ನಿಗಮವು ಹೊಂದಿರುವ ಬೀಜ ಸಂಸ್ಕರಣಾ ಕೇಂದ್ರಗಳು, ಅವುಗಳ ಕಾರ್ಯಸಾಮಥ್ರ್ಯ ಮತ್ತು ಬಳಕೆಯ ವಿವರಗಳನ್ನು 2018-19 ರಲ್ಲಿರುವಂತೆ ಈ ಕೆಳಕಂಡಂತಿರುತ್ತದೆ:
Sl
No
|
Location
|
Operating Capacity
|
Actual Production
|
1)
|
C.B.PUR
|
13200.00
|
1870.00
|
2)
|
KOLAR
|
6160.00
|
900.00
|
3)
|
TUMAKURU
|
13200.00
|
3960.00
|
4)
|
MYSURU
|
13200.00
|
11700.00
|
5)
|
K.R.NAGAR
|
29000.00
|
30635.00
|
6)
|
MANDYA
|
13200.00
|
11810.00
|
7)
|
C.R.PATNA
|
8800.00
|
5970.00
|
Sl
No
|
Location
|
Operating Capacity
|
Actual Production
|
8)
|
DAVANAGERE
|
28000.00
|
16210.00
|
9)
|
SHIVAMOGGA
|
31000.00
|
25565.00
|
10)
|
DHARWAD
|
15840.00
|
20045.00
|
11)
|
GADAG
|
12320.00
|
10245.00
|
12)
|
RON
|
12320.00
|
7300.00
|
13)
|
HAVERI
|
13200.00
|
8670.00
|
14)
|
BALLARI
|
45000.00
|
62380.00
|
15)
|
SINDHANUR
|
13200.00
|
14200.00
|
16)
|
RAICHUR
|
13200.00
|
14775.00
|
17)
|
KOPPAL
|
17600.00
|
4480.00
|
18)
|
KALABURAGI
|
10560.00
|
6185.00
|
19)
|
SAVADATTI
|
13200.00
|
12200.00
|
20)
|
BIDAR
|
13200.00
|
19365.00
|
21)
|
B.R.GUDI
|
12320.00
|
6035.00
|
22)
|
BAGALKOTE
|
22000.00
|
6800.00
|
23)
|
VIJAYAPURA
|
13200.00
|
10530.00
|
24)
|
BHALKI
|
13200.00
|
17850.00
|
25)
|
SIRA
|
17600.00
|
900.00
|
|
Total
|
413720.00
|
330580.00
|
ಇ] ಬೀಜ ಮಾರಾಟ:
ನಿಗಮವು ಪ್ರಮುಖವಾಗಿ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ರೈತರಿಗೆ ಬೀಜವನ್ನು ಒದಗಿಸುತ್ತಿದೆ. ಜೊತೆಗೆ ತನ್ನದೇ ಆದ ಮಾರಾಟ ಕೇಂದ್ರಗಳು, ಸಹಕಾರ ಸಂಘಗಳು, ನಿಗಮದ ಅಧಿಕೃತ ಬೀಜ ಮಾರಾಟಗಾರರ ಮೂಲಕ ಬೀಜ ವಿತರಣೆಯನ್ನು ಮಾಡುತ್ತಿದೆ.
VIII. ನಿಗಮದ ಸಾಧನೆ:
- ಕರ್ನಾಟಕ ರಾಜ್ಯ ಬೀಜ ನಿಗಮವು ತನ್ನ ಪ್ರಸ್ತುತ ಸ್ವರೂಪದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಾ ಲಾಭವನ್ನು ಗಳಿಸುತ್ತಾ ಬಂದಿದೆ. 2002-2003 ರಲ್ಲಿ ಸತತ ಬರಗಾಲದ ಪರಿಸ್ಥಿತಿಯಿಂದಾಗಿ ನಿಗಮವು ನಷ್ಟ ಹೊಂದಿದ್ದನ್ನು ಹೊರತುಪಡಿಸಿದರೆ, ಅಲ್ಲಿಂದೀಚೆಗೆ ಸತತವಾಗಿ ಲಾಭವನ್ನು ಗಳಿಸುತ್ತಾ ಬಂದಿದೆ. 2018-2019ನೇ ಸಾಲಿನಲ್ಲಿ ನಿಗಮವು ರೂ.84.20 ಲಕ್ಷ (ಅಂದಾಜು) ತೆರಿಗೆ ಪೂರ್ವ ಲಾಭವನ್ನು ಗಳಿಸಿದೆ.
- ಬೀಜ ಖರೀದಿಯಲ್ಲಿ ಹೆಚ್ಚಳ:
ನಿಗಮವು 1978-79 ರಲ್ಲಿ ಪ್ರಾರಂಭಗೊಂಡಾಗ ಇದ್ದ ಉತ್ಪಾದನಾ ಪ್ರಮಾಣ 14,318 ಕ್ವಿಂಟಾಲ್ ಗಳಾಗಿದ್ದು, ಅದರ ಮೌಲ್ಯ ರೂ.54.61 ಲಕ್ಷಗಳಾಗಿತ್ತು. 2018-19ನೇ ಸಾಲಿನಲ್ಲಿ ನಿಗಮವು 3,01,500 ಕ್ವಿಂಟಾಲ್ ಬೀಜಗಳನ್ನು ಉತ್ಪಾದನೆಯಿಂದ ಖರೀದಿಸಿದ್ದು, ಅದರ ಮೌಲ್ಯ ರೂ.119.38 ಲಕ್ಷಗಳಾಗಿರುತ್ತದೆ. ನಿಗಮವು ಬೀಜ ಬೆಳೆಗಾರರಿಗೆ ಉತ್ತಮ ಖರೀದಿ ದರಗಳನ್ನು ನೀಡುತ್ತಾ ಬಂದಿದ್ದು, ನಿಗಮದ ಖರೀದಿ ನಿಯಮಗಳು ರಾಜ್ಯದ ಇತರೇ ಬೀಜೋತ್ಪಾದನಾ ಕಂಪನಿಗಳಿಗೆ ಅಡಿಪಾಯವಾಗಿರುತ್ತದೆ.
- ಬೀಜ ಮಾರಾಟದಲ್ಲಿ ಹೆಚ್ಚಳ:
ನಿಗಮವು 1978-79 ರಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮವಾಗಿ ಪ್ರಾರಂಭಗೊಂಡಾಗ 12,090 ಕ್ವಿಂಟಾಲ್ ಬೀಜಗಳನ್ನು ಮಾರಾಟ ಮಾಡಿದ್ದು, ಅದರ ಮೌಲ್ಯ ರೂ.58.40 ಲಕ್ಷಗಳಾಗಿತ್ತು. 2018-19ನೇ ಸಾಲಿನಲ್ಲಿ ನಿಗಮವು 3,14,627 ಕ್ವಿಂಟಾಲ್ ಬೀಜಗಳನ್ನು ಮಾರಾಟ ಮಾಡಿದ್ದು, ಅದರ ಮೌಲ್ಯ ರೂ. 15,205.19 ಲಕ್ಷಗಳಾಗಿರುತ್ತದೆ. ನಿಗಮವು ಮಾರುಕಟ್ಟೆಯಲ್ಲಿ ಪ್ರಮಾಣಿತ ಬೀಜಗಳ ಮಾರಾಟದಲ್ಲಿ ಹೆಚ್ಚಿನ ಪಾಲು ಅಂದರೆ, ಸುಮಾರು ಶೇಕಡ 60 ರಷ್ಟು ಪಾಲನ್ನು ಹೊಂದಿರುತ್ತದೆ. ನಿಗಮವು ಪ್ರಾರಂಭಗೊಂಡಾಗಿನಿಂದ ಸತತವಾಗಿ ಲಾಭ ಗಳಿಸುತ್ತಾ ಬಂದಿರುತ್ತದೆ. ಹಿಂದಿನ ವರ್ಷಗಳಲ್ಲಿನ ನಿಗಮದ ಮಾರಾಟ ಮತ್ತು ಲಾಭಾಂಶಗಳ ವಿವರಗಳನ್ನು ಈ ಕೆಳಗಿನಂತೆ ತೋರಿಸಲಾಗಿದೆ:
YEAR
|
MARKETED
QTY. IN QTLS.
|
SALES
TURN-OVER
(Rs. In Lakhs)
|
PROFIT BEFORE TAX (Rs. In Lakhs)
|
2006 – 2007
|
4,85,971
|
18,598.32
|
161.95
|
2007 – 2008
|
2,54,876
|
5,477.24
|
52.74
|
2008 – 2009
|
2,77,994
|
5,864.23
|
82.24
|
2009 – 2010
|
6,00,045
|
17,810.33
|
708.29
|
2010 – 2011
|
4,74,999
|
16,455.16
|
606.86
|
2011 – 2012
|
3,68,575
|
15013.68
|
659.51
|
2012 – 2013
|
3,96,194
|
20,583.89
|
993.32
|
2013 – 2014
|
2,89,133
|
16,382.85
|
365.39
|
2014 – 2015
|
3,72,172
|
15,329.74
|
65.37
|
2015 – 2016
|
3,52,610
|
15,114.17
|
408.62
|
YEAR
|
MARKETED
QTY. IN QTLS.
|
SALES
TURN-OVER
(Rs. In Lakhs)
|
PROFIT BEFORE TAX (Rs. In Lakhs)
|
2016 – 2017
|
2,96,036
|
15,759.39
|
179.63
|
2017 – 2018
|
3,54,120
|
17,152.09
|
125.53
|
2018 – 2019
(Provisional)
|
3,14,627
|
15,906.89
|
84.33
|
2019 – 20
(Budgeted)
|
4,20,495
|
20,245.00
|
150.06
|
- ತರಬೇತಿ:
ನಿಗಮದ ತಾಂತ್ರಿಕ ಅಧಿಕಾರಿಗಳ ಮೂಲಕ ಬೀಜದ ತಾಕುಗಳನ್ನು ನಿರೀಕ್ಷಣೆ ಮಾಡುವ ಸಂದರ್ಭದಲ್ಲಿ ಬೀಜ ಬೆಳೆಗಾರರಿಗೆ ಸತತವಾಗಿ ತಾಂತ್ರಿಕ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಜೊತೆಗೆ ನಿಗಮವು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಧಾರವಾಡ, ರಾಯಚೂರು ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ಸಹಾಯದೊಂದಿಗೆ ಬೀಜ ಬೆಳೆಗಾರರಿಗೆ ಬೆಳೆವಾರು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ.
ಬೀಜ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡುವ ನಿಟ್ಟಿನಲ್ಲಿ, ನಿಗಮವು 2016-17ನೇ ಸಾಲಿನಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ಅಧ್ಯಯನ ಪ್ರವಾಸವನ್ನು ಏರ್ಪಡಿಸಿತ್ತು.
- ಉತ್ಪನ್ನಗಳ ಶ್ರೇಣಿ:
ನಿಗಮವು ಪ್ರಮುಖವಾಗಿ ಕೃಷಿಗೆ ಸಂಬಂಧಿಸಿದ ಬೆಳೆ/ತಳಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಗಮನ ಹರಿಸುತ್ತಿದ್ದು, ಇತ್ತೀಚೆಗೆ ತರಕಾರಿ ಬೀಜಗಳ ಉತ್ಪಾದನೆ ಮತ್ತು ಮಾರಾಟಕ್ಕೂ ಸಹ ಮಹತ್ವ ನೀಡಲಾಗುತ್ತಿದೆ. ನಿಗಮವು ಸುಮಾರು 22 ವಿವಿಧ ಬೆಳೆಗಳಲ್ಲಿ 105 ಕ್ಕಿಂತ ಹೆಚ್ಚು ತಳಿಯ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಒದಗಿಸುತ್ತಿದೆ. ನಿಗಮವು ರಾಷ್ಟ್ರೀಯ ಬೀಜ ಬ್ಯಾಂಕ್ ಕಾರ್ಯಕ್ರಮದಲ್ಲಿಯೂ ಸಹ ಕ್ರಿಯಾತ್ಮಕವಾಗಿ ಪಾಳ್ಗೊಳ್ಳುತ್ತಿದೆ. ನಿಗಮವು ಪ್ರಸಕ್ತ ಉತ್ಪಾದಿಸಿ ಮಾರಾಟ ಮಾಡುತ್ತಿರುವ ಉತ್ಪನ್ನಗಳ ಪಟ್ಟಿ ಈ ಕೆಳಗಿನಂತಿರುತ್ತದೆ:
SN
|
CROPS
|
VARIETIES
|
CEREALS
|
1
|
HY.JOWAR
|
CSH-14, CSH-16,
|
2
|
RABI JOWAR
|
M-35-1, SPU-2217, BJV-44
|
3
|
HY. MAIZE
|
BRMH-1, COH(M)-8
|
4
|
FODDER MAIZE
|
African Tall
|
5
|
IMP. BAJRA
|
ICTP-8203, Dhanashakthi, ICMH-1301.
|
6
|
RAGI
|
GPU-28, GPU-48, GPU-67, MR-1, MR-6, ML-365, KMR-204, KMR-301, KMR-340, Indaf-7, Indaf-9, VL-352.
|
SN
|
CROPS
|
VARIETIES
|
7
|
HY. PADDY
|
KRH-4
|
8
|
PADDY
|
Jaya, Jyothi, IR-64, Intan, Abhilash, Tellahamsa, BPT-5204, MTU-1001, MTU-1010, Uma, Tanu, MO-4, JGL-1798, JGL-11470, JGL-18047, IET-13901(Tunga), BR-2655, Rasi, KPR-1, KHP-10, KHP-11, GGV-05-01, RNR-15048.
|
9
|
NAVANE
|
DHFT-109-3, HMT-100-1.
|
10
|
SAME
|
DHLM-36-8.
|
11
|
WHEAT
|
DWR-162, UAS-304, UAS-415, UAS-428, GW-322, GW-273, MACS-6222, MACS-6478, DDK-1029, BHU-6, LOK-1.
|
PULSES
|
12
|
COWPEA
|
C-152, DC-15,
|
13
|
GREENGRAM
|
BGS-9, DGGV-2, KKM-3, IPM-2-14.
|
14
|
BLACKGRAM
|
TAU-1, DU-1, DBGV-5, T-9, Rashmi
|
15
|
REDGRAM
|
BRG-1, BRG-2, BRG-4, BRG-5, ICP-8863(Maruthi), TS-3R, BSMR-736, WRP-1, GRG-811.
|
16
|
BENGALGRAM
|
A-1, JG-11, JAKI-9218, VIJAY, GEM-2, BGD-111-1.
|
OILSEEDS
|
17
|
GROUNDNUT
|
TMV-2, GPBD-4, K-6, G-2-52, GKVK-5, KCG-6.
|
18
|
HY.SUNFLOWER
|
KBSH-41, KBSH-44, KBSH-53, DSFH-3, RSFH-1887.
|
19
|
SOYABEAN
|
JS-335, DSB-21.
|
20
|
SAFFLOWER
|
A-1, A-2.
|
FIBRE CROPS
|
|
21
|
GREENMANURE
|
Sunhemp, Diancha.
|
VEGETABLE SEEDS
|
22
|
AVARE
|
HA-4.
|
- ಆರ್ಥಿಕ ಸ್ಥಿತಿ:
2018-2019ರ ಅಂತ್ಯಕ್ಕೆ ನಿಗಮವು ಒಟ್ಟಾರೆ ರೂ.374.89 ಲಕ್ಷಗಳಷ್ಟು ಷೇರು ಬಂಡವಾಳವನ್ನು ಶೇಖರಿಸಿದೆ. ನಿಗಮವು 2018-19 ರ ಅಂತ್ಯಕ್ಕೆ ಒಟ್ಟಾರೆ ರೂ.3635.5 ಲಕ್ಷಗಳಷ್ಟು ಸಾಮಾನ್ಯ ರಿಸವ್ರ್ಸ್ ಮತ್ತು ಸರ್‍ಪ್ಲಸ್‍ನ್ನು ಹೊಂದಿರುತ್ತದೆ. ನಿಗಮದ ಎಲ್ಲಾ ಖರ್ಚು-ವೆಚ್ಚಗಳನ್ನು ತನ್ನದೇ ಸಂಪನ್ಮೂಲಗಳಿಂದ ನಿಗಮವು ಭರಿಸಿಕೊಳ್ಳುತ್ತಾ ಬಂದಿದೆ.
- ಮೂಲಭೂತ ಸೌಕರ್ಯಗಳ ಅಭಿವೃದ್ಧಿ:
ನಿಗಮವು ರಾಷ್ಟ್ರೀಯ ಬೀಜ ಯೋಜನೆ 2 ಮತ್ತು 3ನೇ ಹಂತಗಳಲ್ಲಿ ಭಾಗವಹಿಸಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಆರ್ಥಿಕ ಸಹಾಯವನ್ನು ಪಡೆದಿದೆ. ರಾಷ್ಟ್ರೀಯ ಬೀಜ ಯೋಜನೆ ಹಂತ-2 ರಲ್ಲಿ ನಿಗಮವು ದಾವಣಗೆರೆ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಅತ್ಯಾಧುನಿಕ ಬೀಜ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಓ.ಪಿ.ಪಿ. ಕಾರ್ಯಕ್ರಮದಡಿಯಲ್ಲಿ ಬಳ್ಳಾರಿ ಕೇಂದ್ರದಲ್ಲಿ ಹೆಚ್ಚಿನ ಸಾಮಥ್ರ್ಯದ ಬೀಜ ಸಂಸ್ಕರಣಾ ಸೌಲಭ್ಯವನ್ನು ಮತ್ತು ಬೀಜಗಳನ್ನು ಶೇಖರಿಸಲು ಅತ್ಯಾಧುನಿಕ ಡಿ-ಹ್ಯೂಮಿಡಿಫೈಡ್ ಗೋಡೌನ್ ಅನ್ನು ಸ್ಥಾಪಿಸಲಾಗಿದೆ. ಅಲ್ಲದೆ ಮೈಸೂರು ಮತ್ತು ತುಮಕೂರು ಕೇಂದ್ರಗಳಲ್ಲಿ ಆಧುನಿಕ ಬೀಜ ಶೇಖರಣಾ ಗೋದಾಮುಗಳನ್ನು ಸ್ಥಾಪಿಸಲಾಗಿದೆ. 2008-2009 ರಲ್ಲಿ ಕರ್ನಾಟಕ ಸೀಡ್ ಮಿಷನ್ ಕಾರ್ಯಕ್ರಮದಲ್ಲಿ ಬೀದರ್ ಮತ್ತು ಬಿಜಾಪುರ ಕೇಂದ್ರಗಳಲ್ಲಿ ಅತ್ಯಾಧುನಿಕ ಮತ್ತು ಹೆಚ್ಚಿನ ಸಾಮಥ್ರ್ಯದ ಬೀಜ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2007-2008 ರಿಂದ ನಿಗಮವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಭಾಗವಹಿಸುತ್ತಿದ್ದು, ವಿವಿಧ ಸ್ಥಳಗಳಲ್ಲಿ ಬೀಜ ಸಂಸ್ಕರಣೆ ಮತ್ತು ಶೇಖರಣಾ ಸೌಲಭ್ಯಗಳನ್ನು ಬಲವರ್ಧನೆಗೊಳಿಸಿಕೊಂಡು ಬರುತ್ತಿದೆ. ನಿಗಮದ ಇದುವರೆಗಿನ ಬೀಜ ಶೇಖರಣಾ ಸಾಮಥ್ರ್ಯ ಸುಮಾರು 6.00 ಲಕ್ಷ ಕ್ವಿಂಟಾಲುಗಳಾಗಿದ್ದು, ಬೀಜ ಸಂಸ್ಕರಣೆ ಮತ್ತು ಶೇಖರಣೆ ಸೌಲಭ್ಯಗಳನ್ನು ಬಲವರ್ಧನೆಗೊಳಿಸುವ ಕಾರ್ಯ ಮುಂದುವರೆಯುತ್ತಿದೆ.
- ನಿಗಮದ ಬೆಳವಣಿಗೆಯ ಹೆಜ್ಜೆಗುರುತು:
1) 1978-79 ರಲ್ಲಿ ಅಂದರೆ, ನಿಗಮವು ಸ್ಥಾಪನೆಗೊಂಡ ವರ್ಷದಲ್ಲಿ ಆರ್ಥಿಕ ವಹಿವಾಟು ರೂ. 58.40 ಲಕ್ಷ ಗಳಷ್ಟಿದ್ದು, ಮಾರಾಟದ ಪ್ರಮಾಣ 12,090 ಕ್ವಿಂಟಾಲ್‍ಗಳಷ್ಟಿತ್ತು. 2018-19 ನೇ ಸಾಲಿನ ಅಂತ್ಯಕ್ಕೆ ನಿಗಮದ ಆರ್ಥಿಕ ವಹಿವಾಟು ರೂ.15,205.19 ಲಕ್ಷಗಳಷ್ಟಿದ್ದು, ಮಾರಾಟದ ಪ್ರಮಾಣ 3,14,627 ಕ್ವಿಂಟಾಲ್‍ಗಳಾಗಿರುತ್ತದೆ.
2) ನಿಗಮದ ಉತ್ಪನ್ನಗಳ ಶ್ರೇಣಿ 22 ಬೆಳೆಗಳಲ್ಲಿ ಸುಮಾರು 105 ವಿವಿಧ ತಳಿಗಳಷ್ಟು ವಿಸ್ತಾರವಾಗಿದೆ.
3) ಪ್ರಾರಂಭದಲ್ಲಿ ಕೇವಲ 3 ಸಂಸ್ಕರಣಾ ಕೇಂದ್ರಗಳನ್ನು ಹೊಂದಿದ್ದ ಸಂಸ್ಥೆ, ಈಗ 25 ಸಂಸ್ಕರಣಾ ಕೇಂದ್ರಗಳನ್ನು ಹೊಂದಿದ್ದು, ಇವುಗಳ ಒಟ್ಟಾರೆ ಸಂಸ್ಕರಣೆ ಸಾಮಥ್ರ್ಯ 4,13,720 ಕ್ವಿಂಟಾಲ್ ಆಗಿರುತ್ತದೆ.
4) ನಿಗಮವು 35 ಕಾರ್ಯ ಚಟುವಟಿಕೆ ಕೇಂದ್ರಗಳು ಹಾಗೂ 25 ಸಂಸ್ಕರಣಾ ಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆ 6.00 ಲಕ್ಷ ಕ್ವಿಂಟಾಲ್‍ಗಳಷ್ಟು ಬೀಜ ಶೇಖರಣಾ ಸಾಮಥ್ರ್ಯ ಹೊಂದಿರುವ 40 ಬೀಜ ಗೋದಾಮುಗಳನ್ನು ಹೊಂದಿರುತ್ತದೆ.
5) ನಿಗಮದ ನೋಂದಾಯಿತ ಕಛೇರಿಯನ್ನು ರಾಷ್ಟ್ರೀಯ ಹೆದ್ದಾರಿಗಾಗಿ ಕೆಡವಿದ್ದರಿಂದ ಹೊಸ ಆಡಳಿತ ಕಛೇರಿಯನ್ನು 2015-16 ರಲ್ಲಿ ನಿರ್ಮಿಸಲಾಗಿದೆ.
6) ನಿಗಮವು ಪ್ರಾರಂಭಗೊಂಡಾಗ ಇದ್ದ 13 ಕಾರ್ಯ ನಿರ್ವಹಣಾ ಕೇಂದ್ರಗಳಿಂದ ಪ್ರಸಕ್ತ 35 ಕಾರ್ಯ ನಿರ್ವಹಣಾ ಕೇಂದ್ರಗಳಿಗೆ ವಿಸ್ತಾರಗೊಂಡಿದೆ.
7) ನಿಗಮವು ರಾಜ್ಯದ ಪ್ರಮಾಣಿತ ಬಿತ್ತನೆ ಬೀಜದ ಮಾರುಕಟ್ಟೆಯ ಶೇ.60 ರಷ್ಟು ಪಾಲನ್ನು ಹೊಂದಿರುತ್ತದೆ.
8) ಹೆಚ್ಚಿನ ಮಟ್ಟದಲ್ಲಿ ಹೊಸ ಹೊಸ ರೈತರುಗಳನ್ನು ಗುರುತಿಸಿ ತಾಂತ್ರಿಕ ಮಾಹಿತಿ ನೀಡಿ ಅನುಭವಿ ಬೀಜೋತ್ಪಾದಕ ರೈತರುಗಳ ಸಂಖ್ಯೆಯನ್ನು 1000 ದಿಂದ 11055 ಕ್ಕೆ ಹೆಚ್ಚಿಸಿಕೊಂಡಿದೆ.
9)
ನಿಗಮವು ರಾಜ್ಯದ ಬೀಜ ಉದ್ದಿಮೆಯಲ್ಲಿ, ಬೀಜದ ಖರೀದಿ ದರ ಮತ್ತು ಮಾರಾಟ ದರಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
10) ನಿಗಮವು ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ ತರಕಾರಿ ಸಂಸ್ಕರಣ ಘಟಕವನ್ನು ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ತರಕಾರಿ ಬೀಜ ಉತ್ಪಾದನೆಯನ್ನು ಹೆಚ್ಚಿಸುವತ್ತ ಕ್ರಮವನ್ನು ತೆಗೆದುಕೊಂಡಿದೆ.
11) ನಿಗಮವು ರಾಷ್ರ್ಟೀಯ ಬೀಜ ಬ್ಯಾಂಕ್ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾ ಬರುತ್ತಿದೆ.
- ನಿಗಮವು ಎದುರಿಸುತ್ತಿರುವ ಸವಾಲುಗಳು:
ಅ) ಹೆಚ್ಚಿನ ಲಾಭ ತಂದುಕೊಡುವಂತಹ ಸಂಕರಣಾ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ತರಕಾರಿ ಬೀಜಗಳ ಕೊರತೆಯಿಂದ ಮಾರಾಟ ವಹಿವಾಟು ಹಾಗೂ ಲಾಭಾಂಶದಲ್ಲಿ ನಿಶ್ಚಲತೆ ಹಾಗೂ ಇಳಿಮುಖ.
ಆ) ಬಹುರಾಷ್ಟ್ರೀಯ ಹಾಗೂ ಇತರೇ ಖಾಸಗಿ ಕಂಪನಿಗಳು ಹೊಂದಿರುವಂತಹ ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ತರಕಾರಿ ಬೆಳೆಗಳಲ್ಲಿನ ಜನಪ್ರಿಯ ತಳಿಗಳಿಂದ ತೀವ್ರ ಸ್ಪರ್ಧೆ.
ಇ) ನಿಗಮವು ತನ್ನ ವ್ಯಾಪಾರ / ವಹಿವಾಟನ್ನು ಹೆಚ್ಚಿಸಲು ಹಾಗೂ ನಿಗಮದ ಸರ್ವಾಂಗೀಣ ಬೆಳವಣಿಗೆಗಾಗಿ ಹೆಚ್ಚಿನ ಲಾಭ ತರುವಂತಹ ಸಂಕರಣ ತಳಿಗಳನ್ನು ಗುರುತಿಸಬೇಕಾದ ಹಾಗೂ ಅಭಿವೃದ್ಧಿ ಪಡಿಸುವ ಜವಾಬ್ದಾರಿ.
- IX. 2018-19 ನೇ ಸಾಲಿನ ಕಾರ್ಯಕ್ರಮ ಹಾಗೂ ಸಾಧನೆ ಮತ್ತು 2019-20 ರ ಯೋಜನೆ:
2018-19 ನೇ ಸಾಲಿನ ಕಾರ್ಯಕ್ರಮ ಹಾಗೂ ಸಾಧನೆ:
ಅ) ಮೂಲ ಬೀಜೋತ್ಪಾದನೆ ಕಾರ್ಯಕ್ರಮ:
ನಿಗಮವು 2018-19 ನೇ ಸಾಲಿನಲ್ಲಿ 2890 ಎಕರೆ ವಿಸ್ತೀರ್ಣವನ್ನು ಸಾಧಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮಾರ್ಚ್ -2019 ರ ಅಂತ್ಯಕ್ಕೆ 2272 ಎಕರೆ ಗುರಿಯನ್ನು ಸಾಧಿಸಿದೆ. ಈ ವರ್ಷದಲ್ಲಿ 19,009 ಕ್ವಿಂಟಾಲ್ ಬೀಜ ಖರೀದಿಯ ಗುರಿಯನ್ನು ಹಾಕಿಕೊಳ್ಳಲಾಗಿದ್ದು ಮಾರ್ಚ್ -2019 ರ ಅಂತ್ಯಕ್ಕೆ 7185.00 ಕ್ವಿಂಟಾಲ್ ಬೀಜ ಖರೀದಿಸಿದೆ.
ಆ) ಪ್ರಮಾಣಿತ ಬೀಜೋತ್ಪಾದನೆ ಕಾರ್ಯಕ್ರಮ:
ನಿಗಮವು 2018-19ನೇ ಸಾಲಿನಲ್ಲಿ 89571 ಎಕರೆ ವಿಸ್ತೀರ್ಣವನ್ನು ಸಾಧಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮಾರ್ಚ್ -2019 ರ ಅಂತ್ಯಕ್ಕೆ 57539 ಎಕರೆ ಗುರಿಯನ್ನು ಸಾಧಿಸಿದೆ. ಈ ವರ್ಷದಲ್ಲಿ 4,10,850 ಕ್ವಿಂಟಾಲ್ ಬೀಜ ಖರೀದಿಯ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮಾರ್ಚ್ -2019 ರ ಅಂತ್ಯಕ್ಕೆ 3,01,500 ಕ್ವಿಂಟಾಲ್ ಬೀಜ ಖರೀದಿಸಿದೆ ಮತ್ತು ಬೀಜ ಖರೀದಿ ಪ್ರಗತಿಯಲ್ಲಿರುತ್ತದೆ.
ಇ) ಬೀಜ ವಿತರಣಾ ಕಾರ್ಯಕ್ರಮ:
ನಿಗಮವು 2018-19ನೇ ಸಾಲಿನಲ್ಲಿ 4,62,025 ಕ್ವಿಂಟಾಲ್ ಬೀಜ ಮಾರಾಟದ ಗುರಿ ಮತ್ತು ರೂ. 26,610 ಲಕ್ಷಗಳ ಆರ್ಥಿಕ ವಹಿವಾಟು ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮಾರ್ಚ್ -2019 ರ ಅಂತ್ಯಕ್ಕೆ 3,14,627 ಕ್ವಿಂಟಾಲ್ ಬೀಜ ಮಾರಾಟ ಮಾಡಿ ಶೇಕಡ 68.09 ರಷ್ಟು ಮಾರಾಟದ ಗುರಿ ಸಾಧಿಸಿದೆ ಮತ್ತು ಈ ವರ್ಷದಲ್ಲಿ ರೂ.15271.82 ಲಕ್ಷಗಳ ಆರ್ಥಿಕ ವಹಿವಾಟು ಮಾಡಿ ಶೇಕಡ 57.39 ರಷ್ಟು ಗುರಿ ಸಾಧಿಸಿದೆ.
2019-20 ನೇ ಸಾಲಿನ ಯೋಜನೆ:
ಅ) ಮೂಲ ಬೀಜೋತ್ಪಾದನೆ ಕಾರ್ಯಕ್ರಮ:
2019-20 ರ ಸಾಲಿಗೆ ನಿಗಮವು 3500 ಎಕರೆ ವಿಸ್ತೀರ್ಣದಲ್ಲಿ 19,600 ಕ್ವಿಂಟಾಲ್ ಮೂಲಬೀಜವನ್ನು ಖರೀದಿಸುವ ಗುರಿಯನ್ನು ಹಾಕಿಕೊಂಡಿರುತ್ತದೆ.
ಆ) ಪ್ರಮಾಣಿತ ಬೀಜೋತ್ಪಾದನೆ ಕಾರ್ಯಕ್ರಮ:
ನಿಗಮವು 69,640 ಎಕರೆ ವಿಸ್ತೀರ್ಣದಲ್ಲಿ 4,21,600 ಕ್ವಿಂಟಾಲ್ ಪ್ರಮಾಣಿತ ಬೀಜವನ್ನು ಖರೀದಿಸುವ
ಗುರಿಯನ್ನು ಹಾಕಿಕೊಂಡಿರುತ್ತದೆ.
ಇ) ಬೀಜ ವಿತರಣಾ ಕಾರ್ಯಕ್ರಮ:
ನಿಗಮವು 4,20,495 ಕ್ವಿಂಟಾಲ್ ಮಾರಾಟದ ಗುರಿ ಹಾಗೂ ರೂ.20,245 ಲಕ್ಷ ಆರ್ಥಿಕ ವಹಿವಾಟಿನ
ಗುರಿಯನ್ನು ಹಾಕಿಕೊಳ್ಳಲಾಗಿರುತ್ತದೆ.
- ತಳಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಸ್ಥಾಪನೆ :
- ನಿಗಮವು ಸ್ವಂತ ತಳಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು 2006 ರಲ್ಲಿ ಧಾರವಾಡದಲ್ಲಿ ಸ್ಥಾಪಿಸಿದೆ.
- ಸಂಕರಣ ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಮತ್ತು ಹತ್ತಿ ಬೆಳೆಗಳಲ್ಲಿ ಸಂಶೋಧನಾ ಕಾರ್ಯ ನಡೆಯುತ್ತಿದೆ.
- ಸಂಕರಣ ಮೆಕ್ಕೆಜೋಳದಲ್ಲಿ ಬಿ.ಆರ್.ಎಂ.ಹೆಚ್.1 ಹಾಗೂ ಸಂಕರಣ ಸೂರ್ಯಕಾಂತಿಯಲ್ಲಿ ಬಿಆರ್‍ಎಸ್‍ಎಸ್‍ಸಿ-3
ತಳಿಗಳನ್ನು ವಿತರಣೆಗೆ ಬಿಡುಗಡೆ ಮಾಡಲಾಗಿದೆ.
- ಬಿಟಿ ಹತ್ತಿಯಲ್ಲಿ ಡಿಸಿಹೆಚ್-32 ತಳಿಯ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ಮುಂಗಾರು ಹಂಗಾಮು - 2020 ರಲ್ಲಿ
ಮಾರಾಟಕ್ಕೆ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ,
ನಿಗಮವು ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತು ಸಜ್ಜೆ ಮುಂತಾದ ಬೆಳೆಗಳಲ್ಲಿ ಸಂಕರಣ ಮತ್ತು ತಳಿಗಳ ಅಭಿವೃದ್ಧಿ ಕಾರ್ಯದ ಜೊತೆಗೆ ನಿಗಮದಲ್ಲಿ ಪ್ರಸಕ್ತ ಇರುವ ತಳಿಗಳ ಮೂಲ ಬೀಜದ ಶುದ್ಧೀಕರಣ ಕಾರ್ಯವನ್ನು ಅಗತ್ಯತೆ ಆಧರಿಸಿ ಕೈಗೊಳ್ಳಲಾಗುತ್ತಿದೆ.
- ಸೀಡ್ ರೋಲ್ ಪ್ಲಾನ್:
ರಾಜ್ಯದ ರೈತರಿಗೆ ಅಗತ್ಯವಿರುವ ಪ್ರಮಾಣಿತ ಬೀಜಗಳನ್ನು ಉತ್ಪಾದಿಸಿ ಪೂರೈಕೆ ಮಾಡುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರದ ನಿರ್ಣಯದಂತೆ ಸಾರ್ವಜನಿಕ ಸ್ವಾಮ್ಯದ ಬೀಜೋತ್ಪಾದಕ ಸಂಸ್ಥೆಗಳಾದಂತಹ ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಸಹಕಾರ ಎಣ್ಣೆಕಾಳು ಮಂಡಳಿ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಯೊಂದಿಗೆ ಮೂರು ವರ್ಷಗಳ ಅವಧಿ (2018-19 ರಿಂದ 2020-21) ಗೆ ಒಡಂಬಡಿಕೆ ಮಾಡಿಕೊಂಡಿರುತ್ತವೆ. ಸೀಡ್ ರೋಲ್ ಪ್ಲಾನ್ ಪ್ರಕಾರ ನಿಗಮವು 2018-19ನೇ ಸಾಲಿನಲ್ಲಿ 4.41 (ಮೂಲ ಗುರಿ 5.32) ಲಕ್ಷ ಕ್ವಿಂಟಾಲ್, 2019-20ನೇ ಸಾಲಿನಲ್ಲಿ 5.82 ಲಕ್ಷ ಕ್ವಿಂಟಾಲ್ ಹಾಗೂ 2020-21ನೇ ಸಾಲಿನಲ್ಲಿ 6.05 ಲಕ್ಷ ಕ್ವಿಂಟಾಲ್ ಪ್ರಮಾಣಿತ ಬಿತ್ತನೆ ಬೀಜ ಉತ್ಪಾದನೆಯ ಯೋಜನೆಯನ್ನು ರೂಪಿಸಿಕೊಂಡಿದೆ.