ಅಭಿಪ್ರಾಯ / ಸಲಹೆಗಳು

ತಳಿ ಸಂಶೋಧನೆ ಮತ್ತು ಅಭಿವೃದ್ಧಿ

ತಳಿ ಅಭಿವೃಧ್ದಿ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ, ಧಾರವಾಡ

 ತಳಿ ಅಭಿವೃಧ್ದಿ ಮತ್ತು ಸಂಶೋಧನಾ ಕೇಂದ್ರವು (VRDC),  ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಸಂಶೋದನೆ ಮತ್ತು ಅಭಿವೃಧ್ದಿ ನಿಯಮದ ಪ್ರಕಾರ, ಧಾರವಾಡದಲ್ಲಿ ೨೦೦೬ ನೇ ಇಸ್ವಿಯಲ್ಲಿ ಸ್ಥಾಪನೆಯಾಗಿರುತ್ತದೆ. ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಮತ್ತು ಸಜ್ಜೆ ಬೆಳೆಗಳಲ್ಲಿ ಸಂಕರಣ ತಳಿ ಅಭಿವೃಧ್ದಿಯನ್ನು ಮುಖ್ಯ ಗುರಿಯಾಗಿಸಿಕೊಂಡು, ಖಾಸಗಿ ಕಂಪನಿಯ ಸಂಕರಣ ತಳಿಗಳೊಂದಿಗೆ ಸ್ಪರ್ಧಾತ್ಮಕ ತಳಿಗಳನ್ನು ಅಭಿವೃಧ್ದಿಪಡಿಸುವ ಧ್ಯೆಯವನ್ನು ಹೊಂದಿರುತ್ತದೆ. ತಳಿ ಅಭಿವೃಧ್ದಿ ಮತ್ತು ಸಂಶೋಧನಾ ಕೇಂದ್ರವು, ವಿಜ್ಞಾನ ಮತ್ತು ಉದ್ದಿಮೆ ಸಂಶೋಧನಾ ವಿಭಾಗ, ಭಾರತ ಸರ್ಕಾರ ದಿಂದ ತಳಿ ಸಂಶೋಧನೆ ಮತ್ತು ತಳಿ ಅಭಿವೃಧ್ದಿ ಮಾಡಲು ಮಾನ್ಯತೆ ಪಡೆದಿರುತ್ತದೆ.

 ಸಂಶೋಧನೆ ಮತ್ತು ಅಭಿವೃಧ್ದಿಯ ಮುಖ್ಯ ಉದ್ದೇಶಗಳು:

 1. ಹೊಸ ಸಂಕರಣ ತಳಿಗಳನ್ನು ಅಭಿವೃಧ್ದಿ ಪಡಿಸಲು ಬೇಕಾಗುವ ಉತ್ತಮ ತಾಕುಗಳನ್ನು ಅಭಿವೃಧ್ದಿಪಡಿಸುವುದು

 2. ಅಭಿವೃಧ್ದಿ ಪಡಿಸಿದ ತಳಿಗಳನ್ನು ಕೃಷಿ ಹವಾಮಾನ ವಲಯಗಳಲ್ಲಿ ತಳಿಗಳ ಸ್ಥಿರತೆ ಮತ್ತು ಪ್ರದರ್ಶನವನ್ನು ಮೌಲ್ಯಮಾಪನ ಮಾಡುವುದು

 3. ತಳಿ ಅಭಿವೃಧ್ದಿ ಕಾರ್ಯವನ್ನುಹೆಚ್ಚಿಸಲು ಆಧುನಿಕ ತಳಿ ಅಭಿವೃಧ್ದಿ ತಂತ್ರಗಳನ್ನು  ಅಳವಡಿಸಿಕೊಳ್ಳುವುದು

 4. ಬೀಜ ಪೂರೈಕೆ ಸರಣಿ ನಿರ್ವಹಣೆ: ನ್ಯೂಕ್ಲಿಯರ್/ಬ್ರೀಡರ್ ನಿಂದ ಪೌಂಡೇಶನ್ ಬೀಜಗಳನ್ನು

    ತಳಿಶುಧ್ದತಾ ಮಾನ್ಯತೆಗೆ ಅನುಸಾರವಾಗಿ ನಿರ್ವಹಣೆ ಮಾಡುವುದು

5. ಹೊಸದಾಗಿ ಅಭಿವೃಧ್ದಿ ಪಡಿಸಿದ ಸಂಕರಣ ತಳಿಗಳು, ತಳಿಗಳು, ತಾಕುಗಳು ಮತ್ತು ವೈವಿಧ್ಯೆ

    ತಾಕುಗಳನ್ನು ಭಾರತ ಸರ್ಕಾರದ ಸಸ್ಯ ತಳಿ ರಕ್ಷಣೆ ಕಾನೂನಿನಡಿಯಲ್ಲಿನೋಂದಣಿ ಮಾಡಿಸುವುದು

6. ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ

    ಹೊಸದಾದ ತಾಂತ್ರಿಕತೆಗಳು ಮತ್ತು ತಳಿಗಳನ್ನು ವಾಣಿಜ್ಯ ಕಾರಣಕ್ಕೆಗುರುತಿಸುವುದು, ಪರಿಚಯಿಸುವುದ 

    ಮತ್ತು ಮೌಲ್ಯಮಾಪನ ಮಾಡುವುದು.

 

ಮೂಲಸೌಕರ್ಯ:

 

ಅಭಿವೃಧ್ದಿ ಪಡಿಸಿದ ಸಂಕರಣ  ತಳಿಗಳ ಸ್ಥಿರತೆ ಮತ್ತು ಪ್ರದರ್ಶನ ಗುಣಮಟ್ಟವನ್ನು ಪರೀಕ್ಷಿಸಲು ತಳಿ ಅಭಿವೃಧ್ದಿ ಮತ್ತು ಸಂಶೋಧನಾ ಕೇಂದ್ರವು ರಾಷ್ಟೀಯ ಹೆದ್ದಾರಿ-೪ ಕ್ಕೆ ಹೊಂದಿಕೊಂಡಿರುವಂತೆ , ಕೃಷಿ ವಿಶ್ವವಿದ್ಯಾಲಯ ಧಾರವಾಡದ ಪಕ್ಕದಲ್ಲಿ ೩೮.೧೯ ಹೆಕ್ಟೇರ ವಿಸ್ಥೀರ್ಣದ ಕೃಷಿ ಭೂಮಿಯನ್ನು ಹೊಂದಿದೆ. ಆಣ್ವಿಕ ತಳಿ ಪ್ರಯೋಗಾಲಯವನ್ನು D N A ಬೆರಳಚ್ಚು ಪರೀಕ್ಷೆ, ಗುಣಮಟ್ಟ ಪರೀಕ್ಷೆ ಮತ್ತು ತಳಿ ಅಭಿವೃದ್ಧಿಯಲ್ಲಿ D N A ಮಾರ್ಕರ್ ತಾಂತ್ರಿಕತೆಯನ್ನು ಉಪಯೋಗಿಸಿಕೊಳ್ಳಲು ಸ್ಥಾಪಿಸಲಾಗಿದೆ. ಪ್ರಯೋಗಾಲಯವು ಎಲ್ಲಾ ಅಗತ್ಯದ ಉಪಕರಣಗಳನ್ನು ಹೊಂದಿರುತ್ತದೆ.

 

ಸಾಧನೆಗಳು:

 

೧. ವಾಣಿಜ್ಯ ಮಾರಾಟಕ್ಕಾಗಿ ಗುರುತಿಸಲಾಗಿರುವ ಸಂಕರಣ ತಳಿಗಳು:

ಬೆಳೆ    

ತಳಿ

ಗುಣಲಕ್ಷಣಗಳು

ಮೆಕ್ಕೆಜೋಳ    

ಬಿ ಆರ್ ಎಮ್ ಎಚ್-೧

ಅಧಿಕ ಇಳುವರಿ (೩೦-೩೨ ಕ್ವಿ/ಎಕರೆಗೆ), ಪೂರ್ಣಾವಧಿ ತಳಿ, ದುಂಡು ಮತ್ತು ಕಿತ್ತಳೆ ಬಣ್ಣದ ಕಾಳುಗಳನ್ನು ಹೊಂದಿದೆ ಮತ್ತು ಮಳೆಯಾಶ್ರಿತ ಮತ್ತು ನೀರಾವರಿ ಕ್ಷೇತ್ರಕ್ಕೆ ಸೂಕ್ತವಾದ ತಳಿಯಾಗಿದೆ.

 

ಬಿ ಆರ್ ಎಮ್ ಎಚ್-೮

ಅಧಿಕ ಇಳುವರಿ (೩೨-೩೫ ಕ್ವಿ/ಎಕರೆಗೆ), ಪೂರ್ಣಾವಧಿ ತಳಿ, ಚಪ್ಪಟೆ ಮತ್ತು ಹಳದಿ ಬಣ್ಣದ ಕಾಳುಗಳನ್ನು ಹೊಂದಿದೆ ಮತ್ತು ಮಳೆಯಾಶ್ರಿತ ಮತ್ತು ನೀರಾವರಿ ಕ್ಷೇತ್ರಕ್ಕೆ ಸೂಕ್ತವಾದ ತಳಿಯಾಗಿದೆ.

ಸೂರ್ಯಕಾಂತಿ

ಬಿ ಆರ್ ಎಸ್ ಎಸ್ ಸಿ- ೩

ಅಧಿಕ ಇಳುವರಿ (೭-೮ ಕ್ವಿ/ಎಕರೆಗೆ), ಅಧಿಕ ಎಣ್ಣೆ ಪ್ರಮಾಣ (೩೯-೪೦ %) ಹೊಂದಿದೆ, ಮದ್ಯಮಾವಧಿ ತಳಿಯಾಗಿದ್ದು ಪೀನ ಆಕಾರದ ತೆನೆ ಯನ್ನು ಹೊಂದಿದೆ.

ಸಜ್ಜೆ

ಧನಶಕ್ತಿ (ಐ ಸಿ ಟಿ ಪಿ-೮೩೦೩, Fe ೧೦-೨)    

ICRISAT ಹೈದರಾಬಾದ್ ಸಂಸ್ಥೆಯಿಂದ ಪರಿಚಯಿಸಲಾಗಿದೆ, ಅಧಿಕವಾದ ಸತುವಿನಾಂಶ (೭೨ ಪಿ ಪಿ ಎಮ್) ಮತ್ತು ಕಬ್ಬಿಣಾಂಶ (೪೩ ಪಿ ಪಿ ಎಮ್) ವನ್ನು ಹೊಂದಿದೆ ಹಾಗೂ ಅಧಿಕ ಇಳುವರಿ (೭-೮ ಕ್ವಿ/ಎಕರೆಗೆ), ಕೊಡುವ ತಳಿಯಾಗಿದೆ.

೨. ಬಿ ಟಿ ಹತ್ತಿ ತಳಿ ಅಭಿವೃಧ್ದಿ:

                        ಕರ್ನಾಟಕ ರಾಜ್ಯ ಬೀಜ ನಿಗಮವು,  ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರಿನ ಸಹಯೋಗದೊಂದಿಗೆ Cry  1Ac ಮತ್ತು Cry 2Ab ವಂಶವಾಹಿಗಳನ್ನು ಹೊದಿರುವ Mon BG-II Event (Mon15985) ಉಪಯೊಗಿಸಿಕೊಂಡು ಕಾಯಿಕೊರಕ ಹುಳುಗಳಿಗೆ ಪ್ರತಿರೋಧ ಒಡ್ಡುವ ಶಕ್ತಿಯನ್ನು ಹೊಂದಿರುವ ತಳಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಾಯಿಕೊರಕ ಹುಳುಗಳಿಗೆ ಪ್ರತಿರೋಧ ಒಡ್ಡುವ ಶಕ್ತಿಯನ್ನು ಹೊಂದಿರುವ ಒಟ್ಟು ಹದಿನಾಲ್ಕು ಸಂಕರಣ ತಳಿಗಳು ಅಭಿವೃಧ್ಧಿ ಹಂತದಲ್ಲಿವೆ.

 

ಹೆಚ್ಚುವರಿ ಉದ್ದ ಎಳೆ (36 mm) ಹೊಂದಿರುವ ಡಿ ಸಿ ಎಚ್-೩೨  ಬಿ ಜಿ-೨ (DCH-32 BG-II), ಸಂಕರಣ ತಳಿಯು ವಾಣಿಜ್ಯ ಮಾರಾಟಕ್ಕೆ ಅನುಮೋದನೆ ಪಡೆದಿದೆ.          

 

೩. ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ICRISAT, CYMMIT ಮತ್ತು ಮಹರಾಷ್ಟ್ರ ರಾಜ್ಯ ಬೀಜ ನಿಗಮಗಳ ಸಂಘದೊಂದಿಗೆ ಹೊಸ ತಾಕುಗಳು ಮತ್ತು ಸಂಕರಣ ತಳಿ ಗುರುತಿಸುವಿಕೆ, ಮತ್ತು ಅಭಿವೃಧ್ದಿ ಪಡಿಸುವ ಕೆಲಸದಲ್ಲಿ ತಳಿ ಅಭಿವೃಧ್ದಿ ಮತ್ತು ಸಂಶೋಧನಾ ಕೇಂದ್ರವು ತೊಡಗಿಕೊಂಡಿದೆ. ಹಾರ್ವೆಷ್ಟ ಪ್ಲಸ್+ ಇಕ್ರಿಸ್ಯಾಟ್ ಸಹಯೋಗದೊಂದಿಗೆ  ಅಧಿಕವಾದ ಸತುವಿನಾಂಶ (೭೨ ಪಿ ಪಿ ಎಮ್) ಮತ್ತು ಕಬ್ಬಿಣಾಂಶ (೪೩ ಪಿ ಪಿ ಎಮ್) ವನ್ನು  ಹೊಂದಿರುವ ತಳಿ ಧನಶಕ್ತಿ ಮತ್ತು ಸಂಕರಣ ತಳಿ ಐ ಸಿ ಎಮ್ ಎಚ್-೧೩೦೧ ಗಳನ್ನು ರಾಜ್ಯದ ರೈತರಿಗೋಸ್ಕರ ಮಾರಟಕ್ಕೆ ಪರಿಚಯಿಸಲಾಗಿದೆ.

 

ತಳಿ ಅಭಿವೃಧ್ದಿ ಮತ್ತು ಸಂಶೋಧನಾ ಕೇಂದ್ರವು ನಿರಂತರವಾಗಿ ಅಧಿಕ ಇಳುವರಿ ಕೊಡುವ ಮತ್ತು ಗುಣಮಟ್ಟದ ಸಂಕರಣ ತಳಿಗಳನ್ನು ರಾಜ್ಯದ ರೈತರ ಅನುಕೂಲಕ್ಕಾಗಿ ನಾಲ್ಕು ಪ್ರಮುಖ ಬೆಳೆಗಳಲ್ಲಿ ಅಭಿವೃಧ್ದಿಪಡಿಸಲಾಗುತ್ತಿದೆ. ಹೊಸದಾಗಿ ಅಭಿವೃಧ್ದಿಪಡಿಸಿದ ಸಂಕರಣ ತಳಿಗಳು ಮೌಲ್ಯಮಾಪನದ ಹಂತದಲ್ಲಿರುತ್ತವೆ.                   

 

 

 

 

 

                                               

 

 

                          

 

 

 

 

 

 

 

 

 

 

 

 

 

 

 

 

 

 

 

 

 

​                                                                                                                                                             

 

 

 

                                  

 

 

 

 

 

 

ಇತ್ತೀಚಿನ ನವೀಕರಣ​ : 22-01-2020 05:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080